ಆರೋಗ್ಯ ರಕ್ಷಣೆ ಮಾರ್ಚ್ 28, 2020

2019 ನಾವೆಲ್ ಕೊರೊನ ವೈರಸ್

ನಾವೆಲ್ ಕೊರೊನ ವೈರಸ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳು

ಈ ಸರಣಿಯಲ್ಲಿ, ನೀವು ನಾವೆಲ್ ಕೊರೊನ ಅಥವಾ COVID19 ವೈರಸ್ ಬಗ್ಗೆ ತಿಳಿದುಕೊಳ್ಳುವಿರಿ . ವೈರಸ್ ಎಲ್ಲಿಂದ ಬಂತು, ನೀವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು?
ತಿಳಿದುಕೊಳ್ಳಲು ಮುಂದುವರೆಯಿರಿ

41 ಕಾರ್ಡ್‌ಗಳು

ನಾವು ಸುಮಾ ಜೊತೆ ತಿಳಿದುಕೊಳ್ಳೋಣ.ಸುಮಾ ಜನನಿಬಿಡ ನಗರನಿವಾಸಿ. ಕೊರೊನ ವೈರಸ್ ಬಗ್ಗೆ ಚಿಂತಿತಳಾಗಿದ್ದಾಳೆ . ಇದರಿಂದ ಏನನ್ನು ನಿರೀಕ್ಷಿಸಬಹುದು, ತನ್ನ ಕುಟುಂಬಕ್ಕೆ  ಬರಬಹುದಾದ ಆಪತ್ತಿನ ಬಗ್ಗೆ  ತಿಳಿದುಕೊಳ್ಳಬಯಸುತ್ತಾಳೆ.

ಕೊರೊನ ಜನರ ನಡುವೆ ಹರಡಬಹುದಾದ ಒಂದು ವೈರಸ್ . ವಿಜ್ಞಾನಿಗಳು ಈ ವೈರಸ್ ಸೀನು / ಕೆಮ್ಮಿನಿಂದ / ಎಂಜಲು ಉಗುಳಿದಾಗ ಬರುವ ಹನಿಗಳಿಂದ ಹರಡುತ್ತದೆ ಎಂದು ಅಂದಾಜಿಸಿದ್ದಾರೆ.

ಸುಮಾ ಇರೋ ನಗರದಲ್ಲಿ ಯಾವುದೇ ಕೊರೊನ ಪ್ರಕರಣ ವರದಿ ಆಗಿಲ್ಲ ಹಾಗು ಅವಳು ನಗರದಹೊರಗೆ ಪ್ರಯಾಣ ಮಾಡಿಲ್ಲವಾದ್ದರಿಂದ ವೈರಸ್ ತಗಲುವ ಅಪಾಯ ಕಮ್ಮಿ ಇದೆ.

ಅವಳ ಗಂಡ ಬಾಲು ಆಸ್ಪತ್ರೆಯಲ್ಲಿ ಮೆಲ್ ನರ್ಸ್ ಆಗಿ ಕೆಲಸ ಮಾಡುತ್ತಾನೆ. ಆದರಿಂದ ವೈರಸ್ ಸೋಂಕುಬರುವ ಸಾಧ್ಯತೆ ಜಾಸ್ತಿ ಇದೆ. ಅವನು ನಿನ್ನೆ ಒಬ್ಬ ಜ್ವರ ಹಾಗು ಕೆಮ್ಮಿನಿಂದ ಬಳಲುವ ರೋಗಿಗೆ ಚಿಕಿತ್ಸೆ ನೀಡಿರುತ್ತಾನೆ .

ಬಾಲುವಿನ ಆಸ್ಪತ್ರೆ ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕೆಮ್ಮಿನ ಸಮಸ್ಯೆ ಇರುವ ರೋಗಿಗಳಿಗೆ ಮಾಸ್ಕ್ ಗಳನ್ನು ಕೊಟ್ಟು ಪ್ರತ್ಯೇಕ ಕಾಯುವ ಜಾಗದಲ್ಲಿಕೂರಲು ವ್ಯವಸ್ಥೆ ಮಾಡಿರುತ್ತಾರೆ .

ಬಿಲ್ ಕ್ಲಿನಿಕ್ನಿಂದ ಮನೆಗೆ ಹಿಂದಿರುಗಿದಾಗ, ಅವನು ತನ್ನ ಬೂಟುಗಳನ್ನು ಮತ್ತು ಹೊರಗಿನ ಬಟ್ಟೆಗಳನ್ನು ಗ್ಯಾರೇಜ್ನಲ್ಲಿ ತೆಗೆದುಹಾಕುತ್ತಾನೆ, ನಂತರ ಸ್ನಾನ ಮಾಡುತ್ತಾನೆ. ಮನೆಯೊಳಗೆ ಬರುವ ವೈರಸ್ ಕಣಗಳನ್ನು ಮಿತಿಗೊಳಿಸಲು ಅವನು ಇದನ್ನು ಮಾಡುತ್ತಾನೆ.

ಸುಮಾಳ ಮಗಳು ಸಾನ್ವಿಗೂ ಸೋಂಕುಬರುವ ಸಾಧ್ಯತೆ ಹೆಚ್ಚಾಗಿದೆ .ಅವಳು ಇತ್ತೀಚೆಗೆ ಭೇಟಿ ಮಾಡಿದ ಸ್ನೇಹಿತೆ ಇರೋ ನಗರದಲ್ಲಿ ಬಹಳಷ್ಟು ಕೊರೊನ ಪ್ರಕರಣಗಳು ಪತ್ತೆಯಾಗಿವೆ. ಈಗ ಅವಳ ಸ್ನೇಹಿತೆಯೂ ಅನಾರೋಗ್ಯಕ್ಕೆ ಈಡಾಗಿದ್ದಾಳೆ.

ಸುಮಾ ಪರಿವಾರದ ನಿತ್ಯ  ದಿನಚರಿ ಪರಿಶೀಲಿಸುತ್ತಾಳೆ. ತಾನು ಕೆಲಸ ಮಾಡುವಲ್ಲಿ ತಾನು ಮನೆಯಿಂದ ಕೆಲಸಮಾಡಬಹುದೇ ಎಂದು ಮೇಲಧಿಕಾರಿಯನ್ನು ಕೇಳುತ್ತಾಳೆ. ಮಕ್ಕಳಿಗೆ ಶಾಲೆಗೇ ರಜೆ ಘೋಷಿಸಲಾಗಿದೆಯೇ ಎಂದು ವಿಚಾರಿಸುತ್ತಾಳೆ.

ಸುಮಾ ಹಾಗು ಬಾಲು ಮನೆಗೆ ಹ್ಯಾಂಡ್ ಸ್ಯಾನಿಟೈಸರ್ ಹಾಗು ಸೋಪುಗಳನ್ನು ತರುತ್ತಾರೆ. ವಯಸ್ಸಾದ ಸುಮಾಳ ತಾಯಿಗ ನಿಯಮಿತ ಅರೋಗ್ಯ ತಪಾಸಣೆ ಮಾಡಿಸುತ್ತಾರೆ

ಸುಮಾ ಪರಿವಾರದ ನಿತ್ಯ ಪರಿಶೀಲಿಸುತ್ತಾಳೆ. ತಾನು ಕೆಲಸ ಮಾಡುವಲ್ಲಿ ತಾನು ಮನೆಯಿಂದ ಕೆಲಸಮಾಡಬಹುದೇ ಎಂದು ಮೇಲಧಿಕಾರಿಯನ್ನು ಕೇಳುತ್ತಾಳೆ. ಮಕ್ಕಳಿಗೆ ಶಾಲೆಗೇ ರಜೆ ಘೋಷಿಸಲಾಗಿದೆಯೇ ಎಂದು ವಿಚಾರಿಸುತ್ತಾಳೆ.

ಬಾಲು ತನ್ನ ಮಕ್ಕಳಿಗೆ ಕೈಯನ್ನುಹೇಗೆ ತೊಳೆಯಬೇಕೆಂದು ತೋರಿಸಿಕೊಡುತ್ತಾನೆ. ಶೌಚಾಲಯಕ್ಕೆಹೋದಾಗ, ಸಾರ್ವಜನಿಕ ಸ್ಥಳಗಳಿಗೆ ಹೋದಾಗ, ಸೀನು,ಕೆಮ್ಮು ಬಂದಾಗ, ಆಹಾರಸೇವಿಸುವ ಮುನ್ನ, ಮುಖವನ್ನುಮುಟ್ಟುವ ಮೊದಲು ಕೈಯನ್ನು ತೊಳೆಯಿರಿ.

ಹತ್ತಿರದಲ್ಲಿ ಸೋಪ್ ಅಥವಾ ನೀರು ಇಲ್ಲವೇ?  ಶೇಕಡಾ ೬೦% ಆಲ್ಕೋಹಾಲ್ ಇರುವ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.ಕಡಿಮೆ ಆಲ್ಕೋಹಾಲ್ ಪ್ರಮಾಣ ಇರುವ ಹ್ಯಾಂಡ್ ಸ್ಯಾನಿಟೈಸರ್ಗಳು ಪರಿಣಾಮಕಾರಿಯಾಗಲಾರವು.

ಸಾರಾಂಶ
  • ನಿಮಗೆ ಸೋಂಕು  ತಗಲುವ ಅಪಾಯ ಕೊರೊನ ಸೋಂಕಿತರೊಡನೆ ಎಷ್ಟು ಸನಿಹ ಬಂದ್ದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿದೆ.
  • ಸೋಂಕಿತ ಪ್ರದೇಶದಿಂದ ದೂರವಿರುವುದರಿಂದ ಸೋಂಕಿನ ಅಪಾಯ ತಗ್ಗಿಸಿ.
  • ಆಗ್ಗಾಗ ಕೈತೊಳೆಯುವ ಅಭ್ಯಾಸಮಾಡಿಕೊಳ್ಳಿ
  • ಮುಖವನ್ನು ಆಗಾಗ ಮುಟ್ಟುವುದನ್ನು ನಿಲ್ಲಿಸಿ.

December 2019ರಲ್ಲಿ ಚೀನಾದ ವುಹಾನ್ ನಗರದಲ್ಲಿ ಬಹಳಷ್ಟು ಜನರು ಫ್ಲೂ ಮಾದರಿಯ ಜ್ವರಕ್ಕೆ ತುತ್ತಾದಾಗ ಡಾಕ್ಟರ್ಗಳು ನಾವೆಲ್ ಕೊರೊನ ವೈರಸ್ ಪತ್ತೆ ಮಾಡಿದರು. ಹಿಂದೆ ಪತ್ತೆಯಾಗಿಲ್ಲದರಿಂದ ನವೀನ ಅಥವಾ novel ಕೊರೊನ ಅಂತ ಹೆಸರಿಡಲಾಗಿದೆ . 

ಹೊಸ ವೈರಸ್ಗಳು ಪತ್ತೆಯಾಗುತ್ತಲೇ  ಇರುತ್ತವೆ . ವೈರಸ್ ಒಂದು ಸೂಕ್ಶ್ಮಾಣು ಪರಾವಲಂಬಿ ಜೀವಿ. ವೈರಸ್  ಜೀವಿಗಳ ಜೀವಕೋಶದಲ್ಲಿ  ತಮ್ಮನ್ನು ನಕಲಿಸಿಕೊಂಡು ಬೆಳೆಯುತ್ತವೆ.

ಕೊರೊನ ವೈರಸ್ಗಳಿಗೆ ಸುತ್ತಲೂ  ಪ್ರೊಟೀನುಗಳಿಂದ  ಮಾಡಿದ ಕೀರಿಟ ಅಥವಾ  crown ಮಾದರಿಯ ರಚನೆ ಇರುತ್ತವೆ . ಜಗತ್ತಿನಲ್ಲಿ ಬಹಳಷ್ಟು ಕೊರೊನ ವೈರಸ್ಗಳಿವೆ . ಬಾವಲಿ ಹಾಗು ಪಕ್ಷಿಗಳಲ್ಲಿಯೂ ಕೊರೊನ ವೈರಸ್ ಪತ್ತೆ ಆಗಿವೆ .

ಪ್ರಾಣಿ ಹಾಗು ಮನುಷ್ಯರ ನಡುವೆ ಸಂಘರ್ಷವೇರ್ಪಟ್ಟಾಗ, ಮನುಷ್ಯರಿಗೆ  ಈ ಸೋಂಕು ತಗಲಿರುವ ಸಾಧ್ಯತೆ ಇದೆ . 

ತರಹೇವಾರಿ ಫ್ಲೂ  ಜ್ವರದಂತೆ ನಾನಾ ತರಹದ ಕೊರೊನ  ವೈರಸ್ಗಳಿವೆ . ಕೆಲವು ಸೌಮ್ಯವಾದ ಅನಾರೋಗ್ಯ ಉಂಟು ಮಾಡಿದರೆ ಕೆಲವು ತೀವ್ರವಾದ ಅನಾರೋಗ್ಯ ಉಂಟು ಮಾಡುತ್ತವೆ . ಉದಾಹರಣೆಗೆ ಸಾರ್ಸ್ ಕೊರೊನ ವೈರಸ್.

೨೦೧೯ ನಾವೆಲ್ ಕೊರೊನ  ವೈರಸ್ಗೆ ಮತ್ತು ಸಾರ್ಸ್ ಕೊರೊನ ವೈರಸ್ಗೆ ಸಾಮ್ಯತೆಗಳಿದ್ದು ವಿಜ್ಞಾನಿಗಳು ಇದನ್ನು ಸಾರ್ಸ್ ಕೊರೊನ  ವೈರಸ್ ೨ ಅಥವಾ  “SARS-CoV-2”  ಎಂದು ನಾಮಕರಣ ಮಾಡಿದ್ದಾರೆ . 

ಸಾರಾಂಶ
  • ನಾವೆಲ್ ಕೊರೊನ ವೈರಸ್ ಒಂದು ಸೂಕ್ಶ್ಮಾಣು ಪರಾವಲಂಬಿ ಜೀವಿ.
  • ೨೦೧೯ ನಾವೆಲ್ ಕೊರೊನ  ವೈರಸ್ಗೆ ಮತ್ತು ಸಾರ್ಸ್ ಕೊರೊನ ವೈರಸ್ಗೆ ಸಾಮ್ಯತೆಗಳಿದ್ದು,ಲವು ಸೌಮ್ಯವಾದ ಅನಾರೋಗ್ಯ ಉಂಟು ಮಾಡಿದರೆ ಕೆಲವು ತೀವ್ರವಾದ ಅನಾರೋಗ್ಯ ಉಂಟು ಮಾಡುತ್ತವೆ 
  • ಮೂಲವಾಗಿ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ . .

ಸುಮಾ ಟಿವಿ ವಾಹಿನಿಗಳಿಂದ ತನ್ನ ನಗರದಜನರಿಗ ಕೊರೊನ ವೈರಸ್ ಸೋಂಕು ತಗುಲಿದೆ ಎಂದು ಕೇಳುತ್ತಾಳೆ. ಟಿವಿಯಲ್ಲಿ “ಸಮುದಾಯದಲ್ಲಿ  ಹರಡುವಿಕೆ” ಬಗ್ಗೆ ಚರ್ಚಿಸುತ್ತ ಇದ್ದಾರೆ. 

ಸಮುದಾಯದಲ್ಲಿ ಹರಡುವಿಕೆ ಅಂದರೆ ಒಂದು ಪ್ರದೇಶದಲ್ಲಿ ಒಂದಷ್ಟು ಜನರು ಸೋಂಕಿತರಾಗಿದ್ದಾರೆ . ಆದರೆ ಕೆಲವರಿಗೆ ಸೋಂಕು ತಮಗೆ ತಗುಲಿರೋದು ಅವರ ಗಮನಕ್ಕೆ ಬಂದಿಲ್ಲ. ವೈರಸ್ ಜನರಿಂದ ಜನರಿಗೆ ಹರಡುತ್ತಿದೆ.

ನಿಮ್ಮ ಪ್ರದೇಶದಲ್ಲಿ ಸಮುದಾಯ ಹರಡುವಿಕೆ ಆಗುತ್ತಿದ್ದರೆ ಸಾರ್ವಜನಿಕ ಸ್ಥಳಗಲ್ಲಿ ಓಡಾಡುವುದು ಕಡಿಮೆ ಮಾಡಿ . ಕೈ ಕುಲುಕೋದು ನಿಲ್ಲಿಸಿ . ಅಪರಿಚಿತ ಜನರ ತುಂಬಾ ಹತ್ತಿರ ನಿಲ್ಲಬೇಡಿ . ಇದನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ  (“social distancing.”) ಎನ್ನುತ್ತಾರೆ.I

ಮಾಸ್ಕ್ ್  ಯಾವುದು ಸೂಕ್ತ ? ಕೆಲವು ವಿಶೇಷ ಮಾಸ್ಕ್ ್ಗಳನ್ನು ಸರಿಯಾದ ಕ್ರಮದಲ್ಲಿ ಧರಿಸಿದರೆ ಸ್ಥಳೀಯ ಡಾಕ್ಟರ್ ಹಾಗು ನರ್ಸ್ಗಳನ್ನು ರಕ್ಷಿಸಬಹುದು .ಜನರ ಸೋಂಕು ಹರಡದಂತೆ ತಡೆಗಟ್ಟಲು ಮಾಸ್ಕ್  ಸಹಕಾರಿ.

ಆದರೆ ನೀವು ಆರೋಗ್ಯವಂತರಾಗಿದ್ದರೆ, ನಿಮಗೆ ಮುಖವಾಡ ಅಗತ್ಯವಿಲ್ಲ. ಅವರು ವೈರಸ್ ಕಣಗಳು ಬರುವುದನ್ನು ತಡೆಯುವುದಿಲ್ಲ. ನೀವು COVID-19 ಅನ್ನು ರೋಗಲಕ್ಷಣಗಳಿಲ್ಲದೆ ಹೊಂದಬಹುದು, ಆದ್ದರಿಂದ ಕೆಮ್ಮುಗಳನ್ನು ಮುಚ್ಚಲು ಮುಖವಾಡವನ್ನು ಧರಿಸುವುದರಿಂದ ಇತರರನ್ನು ರಕ್ಷಿಸಬಹುದು. ಮುಖವಾಡವನ್ನು ಹಾಕುವ ಮೊದಲು ಅಥವಾ ಹೊಂದಿಸುವ ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ.

ಶ್ವಾಸಕೋಶ,ಕಿಡ್ನಿ,ಹೃದಯಸಂಭಂದಿ ಕಾಯಿಲೆ ಇರುವ ಜನರಿಗೆ ಕೊರೊನ ವೈರಸ್ ಬಹಳ ಅಪಾಯಕಾರಿ. ಈ ಕಾಯಿಲೆ ಉಳ್ಳವರು  ೬೫  ವರ್ಷ ಮೇಲ್ಪಟ್ಟವರಾಗಿದ್ದಾರೆ ಆದಷ್ಟು ಮನೆಯಲ್ಲೇ ಇರುವಂತೆ ಮಾಡಿಕೊಳ್ಳಬೇಕು ಜ್ವರವಿದ್ದವರೊಡನೆ ದೂರವಿರಬೇಕು..

ಸಾಕಷ್ಟು ಮುಂಜಾಗ್ರತಾ ಕ್ರಮದ ನಡುವೆಯೂ ನೀವು ಕಾಯಿಲೆಗೊಳಗಾದರೆ ಮಾಡಬೇಕು ? ನಿಮಗೆ ದೀರ್ಘಕಾಲದ ಕಾಯಿಲೆ ಇಲ್ಲ ಅಂದರೆ ನಿಮಗೆ ಹೆಚ್ಚೇನೂ ಅನಾರೋಗ್ಯ ಕಾಡಲಾರದು. ತಿಳಿದುಕೊಳ್ಳಲು ಮುಂದುವರೆಯಿರಿ.

ಸುಮಾಳ ಮಗಳು ಸಾನ್ವಿಗೆ ಹುಷಾರಿಲ್ಲ ಹಾಗು ಸ್ವಲ್ಪ ಜ್ವರ ಕಾಣಿಸಿಕೊಳ್ಳುತ್ತದೆ . ಕೊರೊನ ವೈರಸ್ ಲಕ್ಷಣಗಳು ಕೆಮ್ಮು,ಜ್ವರ, ಮೈಕೈನೋವು, ಉಸಿರಾಟದ ತೊಂದರೆ, ತಲೆನೋವು, ಗಂಟಲು ಕೆರೆತ ಹಾಗು ಭೇದಿ.

ಸಾನ್ವಿ  ಪ್ರತ್ಯೇಕವಾಗಿ ಮನೆಯಲ್ಲಿ ಇರತೊಡಗುತ್ತಾಳೆ. ಕಾಲೇಜಿಗೆ ಹೋಗದೆ ಮನೆಯಲ್ಲೇ ಇರುತ್ತಾಳೆ. ಇದು ವೈರಸ್  ಹರಡುವಿಕೆ ತಡೆಗಟ್ಟುತ್ತದೆ. ತನ್ನ ಅಜ್ಜಿಯ ನಡುವೆ ಅಂತರ ಕಾಯ್ದುಕೊಳ್ಳುತ್ತಾಳೆ .

ಸಾನ್ವಿಗೆ ಕೆಮ್ಮುಹೆಚ್ಚಾದಾಗ ಕರವಸ್ತ್ರ ಅಥವಾ ಟಿಶ್ಯೂ ಮುಖಕ್ಕೆ ಹಿಡಿದುಕೊಳ್ಳುತ್ತಾಳೆ ಅಥವಾ ತನ್ನಮೊಣಕೈ ಅಡ್ಡ ಹಿಡೀತಾಳೆ. ಕಾಯಿಲೆ ಇರುವವರು ಮನೆಯಿಂದ ಹೊರಗಡೆ ಹೋಗುವಾಗ ಮುಖಕ್ಕೆ ಮಾಸ್ಕ್ ್ ಧರಿಸಬೇಕು .

ಸಾನ್ವಿ ಕೆಮ್ಮು ಹಾಗು ಜ್ವರ ಕೊರೊನ ವೈರಸ್ ಎಂದು ಮೇಲ್ನೋಟಕ್ಕೆ ತೋರುತ್ತದೆ. ಸುಮಾ ತಮ್ಮ ಫ್ಯಾಮಿಲಿ ಡಾಕ್ಟರ್ ಸಂಪರ್ಕಿಸುತ್ತಾಳೆ.

ಸಾನ್ವಿಯ ರೋಗ ಲಕ್ಷಣಗಳು ತೀವ್ರವಾದುದಲ್ಲ, ಮಾಮೂಲಿ ಕೆಮ್ಮಿನ ಔಷದಿ ತಗೋಬಹುದು ಎಂದು ಡಾಕ್ಟರ್ ಸೂಚಿಸುತ್ತಾರೆ. ಸರಿಯಾದ ಮಾಸ್ಕ್ ್ ಹಾಗು ಗ್ಲೋವ್ಸ್ ಬಳಕೆ ಸಾನ್ವಿಯನ್ನು ರೋಗದಿಂದ ರಕ್ಷಿಸಬಹದು.

ತೀವ್ರತರವಾದ ಲಕ್ಷಣಗಳು - ಉಸಿರಾಟದ ತೊಂದರೆ, ತೀವ್ರಎದೆನೋವು, ನಡುಕ ಹಾಗು ಬೆವರು. ಈ ಲಕ್ಷಣಗಳು ಕಾಣಿಸಿಕೊಂಡರೆ  ಕೂಡಲೇ  ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ

ಪರಿವಾರ ಇಡೀ ಮನೆಯನ್ನು ಸ್ವಚ್ಛಗೊಳಿಸುತ್ತದೆ.ಫ್ಲೂ ವೈರಸ್ನಿಂದ ರಕ್ಷಿಸಿಕೊಳ್ಳುವ ವಿಧಾನವೇ ಇಲ್ಲೂ ಪರಿಣಾಮಕಾರಿ.

ಸಾನ್ವಿಯ ತಮ್ಮ ತನ್ನ ಅಕ್ಕನನ್ನು ನೋಡಿ ಭಯಗೊಳ್ಳುತ್ತಾನೆ. ಬಾಲು ಮಗನನ್ನು ಹೆದರುವ ಅಗತ್ಯವಿಲ್ಲವೆಂದು ಧೈರ್ಯ ತುಂಬುತ್ತಾನೆ..

ಮಗಳಿಗೆ ಜ್ವರವಿರುವುದರಿಂದ ಮಗನನ್ನು ಶಾಲೆಗೇ ಹೋಗದಂತೆ ಸುಮಾ ತಡೆಯುತ್ತಾಳೆ.ಇದರಿಂದಬೇರೆ ಕುಟುಂಬಕ್ಕೆ ರೋಗ ಹರಡುವುದು ತಪ್ಪುತ್ತದೆ

ನೀವು ಈ ಕಾಯಿಲೆಗೆ ಒಳಗಾದರೆ ಸಾಯುವ ಸಾಧ್ಯತೆ ತುಂಬಾ ಕಡಿಮೆ. ಹಿರಿಯರಿಗಿಂತ ಮಕ್ಕಳಿಗೆ ರೋಗದ ಕಡಿಮೆ.  .೮೦ ವರ್ಷದ ಮೇಲ್ಪಟ್ಟ ಜನರಿಗೆ ಈ ಕಾಯಿಲೆ ಅಪಾಯಕಾರಿ.

ನಿಮಗೆ ಕೊರೊನ ವೈರಸ್ ಲಕ್ಷಣಗಳು ಕಂಡು ಬಂದರೆ ಮನೆಯಿಂದ ಹೊರಗೆ ಹೋಗಬೇಡಿ. ಬೇರೆಯವರಿಂದ ಅಂತರ ಕಾಯ್ದುಕೊಳ್ಳಿ .. ಮುಖಕ್ಕೆ ಮಾಸ್ಕ್ ಧರಿಸಿ .ನಿಮಗೆ ಉಸಿರಾಟದತೊಂದರೆ, ಬೆವರು, ಎದೆ ನೋವು,ನಿದ್ರಾಹೀನತೆ ಕಂಡು ಬಂದಾಗ ತುರ್ತು ಅರೋಗ್ಯಸೇವೆ ಸಂಪರ್ಕಿಸಿ.ಎಮರ್ಜೆನ್ಸಿ ನಂ ೧೦೪.

ವಾರಗಳ ನಂತರ, ಸುಸಾನ್ ತನ್ನ ನಗರದ ಜನರು “ಅಗತ್ಯ” ಕೆಲಸ ಮಾಡದ ಹೊರತು ಮನೆಯಲ್ಲಿಯೇ ಇರಬೇಕೆಂದು ಸರ್ಕಾರಿ ಅಧಿಕಾರಿಗಳಿಂದ ಕೇಳುತ್ತಾರೆ, ಅಥವಾ ಅವರು ಕಾಳಜಿ ವಹಿಸುವ ಅವಶ್ಯಕತೆಯಿದೆ.

ಬಿಲ್ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲಸಕ್ಕೆ ಹೋಗುತ್ತಾನೆ, ಆದರೆ ಕುಟುಂಬದ ಉಳಿದವರು ಮನೆಯಲ್ಲಿಯೇ ಇರುತ್ತಾರೆ. ಕಿರಾಣಿ ವಿತರಣಾ ಸೇವೆಗೆ ಸುಸಾನ್ ಪರಿಶೀಲಿಸುತ್ತಾನೆ. ಅವರ ಮಕ್ಕಳು ತಮ್ಮ ಸ್ನೇಹಿತರು ಮತ್ತು ಅಜ್ಜಿಯೊಂದಿಗೆ ಮಾತನಾಡಲು ವೀಡಿಯೊ ಚಾಟ್ ಬಳಸುತ್ತಾರೆ. ಇದು ತಿಳಿಯದೆ ಅವರ ಸ್ನೇಹಿತರು ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ಬಿಲ್ ಹೇಳುತ್ತಾರೆ.

ಕೊರೊನ ವೈರಸ್ಗೆ ಯಾವುದೇ ಲಸಿಕೆ ಹಾಗು ಚಿಕಿತ್ಸೆ ಲಭ್ಯವಿಲ್ಲ.ವಿಜ್ಞಾನಿಗಳು ಇನ್ನು ಲಸಿಕೆ ಕಂಡುಹಿಡಿಯುವಲ್ಲಿ ತೊಡಗಿದ್ದಾರೆ. ಚಿಕಿತ್ಸೆ ಕಂಡುಹಿಡುಯಲು ಕೆಲವು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು..

ಸಾರಾಂಶ

ರೋಗದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಸುರಕ್ಷಿತೆಯೆಡೆಗೆ ಮೊದಲ ಹೆಜ್ಜೆ.

ನಿಮ್ಮನ್ನು ಬೇರೆಯರಿಂದ ರಕ್ಷಿಸಿಕೊಳ್ಳುವುದು ಹಾಗು ಕಾಯಿಲೆ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಿಮ್ಮ ಜವಾಬ್ದಾರಿ.

ರೋಗ ಹರಡತೊಡಗಿಗಾಗ, ಮಾಧ್ಯಮಗಳಿಂದ ಹಾಗು ಸ್ಥಳೀಯ ಅರೋಗ್ಯ ಕೇಂದ್ರಗಳಿಂದ ಮಾಹಿತಿ ಪಡೆಯುತ್ತೀರಿ.
ಐಚ್ al ಿಕ ಪ್ರತಿಕ್ರಿಯೆ

ಈ ಕೋರ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇವರಿಂದ ವಿಮರ್ಶಿಸಲಾಗಿದೆ
Tara C. Smith, PhD.

Dr. Smith is a Professor of Epidemiology at Kent State. Her research focuses on zoonotic infections transferred between animals and humans.

ಇವರಿಂದ ವಿಮರ್ಶಿಸಲಾಗಿದೆ
Ian Mackay, PhD.

Dr. Mackay works in public health virology. He detects and characterizes viruses that are a threat to the public.

ಇವರಿಂದ ವಿಮರ್ಶಿಸಲಾಗಿದೆ
Harrison Kalodimos, MD.

Dr. Kalodimos is a family doctor practicing primary care in Seattle, Washington.


ಭಾಷೆ
ಹಂಚಿಕೊಳ್ಳಿ
ಮೂಲಗಳು
ಇನ್ನಷ್ಟು ತಿಳಿಯಿರಿ
ಕಲೆ ಮತ್ತು ಕಥೆ ಹೇಳುವಿಕೆಯ ಮೂಲಕ ಕಲಿಕೆ ವಿಜ್ಞಾನ ಮತ್ತು ಆರೋಗ್ಯವನ್ನು ವಿನೋದಮಯವಾಗಿ ಮತ್ತು ತಲುಪುವಂತೆ ಮಾಡುವ ಉದ್ದೇಶದಿಂದ ಜೀವಶಾಸ್ತ್ರವಿದೆ.

ಲೈಫಾಲಜಿ ಎನ್ನುವುದು ವಿಜ್ಞಾನ ಮತ್ತು ಕಲೆಯನ್ನು ಯಾರಾದರೂ ಆನಂದಿಸಬಹುದಾದ ಸಚಿತ್ರ ಮಿನಿ ಕೋರ್ಸ್‌ಗಳಲ್ಲಿ ಸಂಯೋಜಿಸುವ ಒಂದು ವೇದಿಕೆಯಾಗಿದೆ! ವಿಜ್ಞಾನ ಮತ್ತು ಆರೋಗ್ಯ ಸಂವಹನವನ್ನು ನವೀನಗೊಳಿಸಲು ತಜ್ಞರು, ಸೃಷ್ಟಿಕರ್ತರು ಮತ್ತು ಓದುಗರನ್ನು ಒಟ್ಟುಗೂಡಿಸುವ ಸಮುದಾಯ ಸ್ಥಳವನ್ನು ನಾವು ಹೊಂದಿದ್ದೇವೆ.

ಇನ್ನಷ್ಟು ತಿಳಿಯಲು Lifeology.io ಗೆ ಭೇಟಿ ನೀಡಿ.